ರವಿಶಂಕರ್ ಹುಟ್ಟುಹಬ್ಬಕ್ಕೆ 'ಕಾಲೇಜ್ ಕುಮಾರ್' ತಂಡದ ಗಿಫ್ಟ್. ಕನ್ನಡ ಚಿತ್ರರಂಗದ ಸಕಲಕಲಾವಲ್ಲಭ ಆರುಮುಗ ರವಿಶಂಕರ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಈ ಖುಷಿಯನ್ನು ಇದೀಗ 'ಕಾಲೇಜ್ ಕುಮಾರ್' ತಂಡ ಮತ್ತಷ್ಟು ಜಾಸ್ತಿ ಮಾಡಿದೆ.ರವಿಶಂಕರ್ ಅವರ ಬರ್ತ್ ಡೇ ವಿಶೇಷವಾಗಿ 'ಕಾಲೇಜ್ ಕುಮಾರ್' ಚಿತ್ರತಂಡ ಸ್ಪೆಷಲ್ ಟೀಸರ್ ವೊಂದನ್ನು ಬಿಡುಗಡೆ ಮಾಡಿದೆ. ಈ ಮೂಲಕ ರವಿಶಂಕರ್ ಅವರಿಗೆ ವಿಶೇಷವಾಗಿ ಶುಭಕೋರಿದೆ.'ಕಾಲೇಜ್ ಕುಮಾರ್' ರವಿಶಂಕರ್ ಅವರ ಇತ್ತೀಚಿಗೆ ರಿಲೀಸ್ ಆದ ಸಿನಿಮಾ. ಸಂತು ನಿರ್ದೇಶನದ ಈ ಚಿತ್ರದಲ್ಲಿ ಒಬ್ಬ ತಂದೆಯ ಪಾತ್ರದಲ್ಲಿ ರವಿಶಂಕರ್ ನಟಿಸಿದ್ದರು. ರವಿಶಂಕರ್ ಕೆರಿಯಲ್ ನಲ್ಲಿನ ಮಹತ್ವದ ಪಾತ್ರಗಳಲ್ಲಿ ಇದು ಕೂಡ ಒಂದಾಗಿತ್ತು. ಇನ್ನು 'ಕಾಲೇಜ್ ಕುಮಾರ್' ಸಿನಿಮಾ ಸದ್ಯ 50ನೇ ದಿನದ ಸನಿಹದಲ್ಲಿದೆ.2011ರಲ್ಲಿ 'ಕೋಟೆ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ರವಿಶಂಕರ್ ಎರಡನೇ ಚಿತ್ರವಾದ 'ಕೆಂಪೇಗೌಡ' ಮೂಲಕ ದೊಡ್ಡ ಜನಪ್ರಿಯತೆ ಪಡೆದರು.
'College Kumar' movie teaser released on the occasion of Actor Arumuga Ravi Shankar's 51st Birthday.